ಉಡುಪಿ ಮಲ್ಲಿಗೆ ಉಡುಪಿ ಸಮೀಪದ ಶಂಕರಪುರ ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ ಭಾರತದ ಭೌಗೋಳಿಕ ಚೆನ್ಹೆಯ ಮಾನ್ಯತೆ ದೊರೆತಿದೆ. == ವೈಜ್ಞಾನಿಕ ವರ್ಗೀಕರಣ == ಉಡುಪಿ ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ಜಾಸ್ಮಿನಮ್ ಸಂಬಾಕ್ ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ ಉಡುಪಿ ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ ಶಂಕರಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ. == ಲಕ್ಷಣಗಳು == ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ. ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ. == ಬೇಸಾಯ == ಮರಳು ಮಿಶ್ರಿತಮಣ್ಣು ,ಮತ್ತು ಇಳಿಜಾರು ಪ್ರದೇಶದಲ್ಲಿ ಈ ಗಿಡವನ್ನು ನೆಡುತ್ತಾರೆ. ದೊಡ್ಡ ಮರದ ಬೇರು ಬರದಂತೆ ನೋಡಿಕೊಳ್ಳಬೇಕು ಸಸ್ಯ ನಡಿವಾಗ ಅಗತ್ಯಕ್ಕೆ ಅನುಸಾರವಾಗಿ ಗುಂಡಿಯನ್ನು ತೆಗೆಯಬೇಕು. ಹೆಚ್ಚು ಬಿಸಿಲು ಬೀಳುವ ಪ್ರದೇಶವಾಗಿರಬೇಕು. ಅಗತ್ಯಕ್ಕೆ ಅನುಸಾರವಾಗಿ ನೀರನ್ನು ನೀಡಬೇಕು. ಇದಕ್ಕೆ ಕೀಟಬಾದೆ ಇರುವುದರಿಂದ ಕೀಟನಾಶಗಳ ಸಿಂಪಡಣೆ ಅಗತ್ಯ. ಅದರ ಬುಡದಲ್ಲಿ ಬೆಳೆಯುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಮಳೆಗಾಲದ ಸಮಯದಲ್ಲಿ ಬಿಸಿಲು ಸರಿಯಾಗಿ ಬೀಳದೆ ಮೊಗ್ಗುಗಳು ಸಣ್ಣದಾಗುತ್ತದೆ . ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ. == ಉಪಯೋಗಗಳು == ಉಡುಪಿ ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು, ಮುಡಿಯಲು ಉಪಯೋಗಿಸುತ್ತಾರೆ. ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು ಉಪಯೋಗದಲ್ಲಿದೆ. == ಔಷಧೀಯ ಗುಣಗಳು == ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು. == ವಾಣಿಜ್ಯ ಪ್ರಾಮುಖ್ಯತೆ == ಉಡುಪಿಯ ಸುತ್ತಮುತ್ತ ಉಡುಪಿ ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ ಮಂಗಳೂರು, ಮುಂಬಯಿಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == " ." . 3 2008. " ". . , . 2008-06-03. " ". : 12. 2011-01-07. 2008-06-03. " . ° 1950". . , Genève . 2012-12-06. 2008-06-03. "". . . 2008-06-03. , . (1999). . . 0-395-95920-9.